ಇಂದು ಕೇಂದ್ರ ಸರಕಾರದ ಕೊನೆಯ ಬಜೆಟ್ ಮಂಡನೆ ಹೆಚ್ಚಿದ ನಿರೀಕ್ಷೆ
ನವದೆಹಲಿ:
ಕೇಂದ್ರಸರಕಾರದ ಎರಡನೇ ಅವದಿಯ ಕೊನೆಯ ಬಜೆಟ್ ಇಂದು ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್-2023 ಮಂಡಿಸಲಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆಗಳು ಸಮೀಪಿಸಿದ್ದು ಕೇಂದ್ರದ ಬಜೆಟ್ ನಲ್ಲಿ ಏನಿರಲಿದೆ ಎಂಬ ಕುತೂಹಲ ಹೆಚ್ಚಿದೆ.
ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 5ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆಗೂ ಮೊದಲು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಗವತ್ ಕೃಷ್ಣರಾವ್ ಕರಡ್, ತಮ್ಮ ಮನೆಯಲ್ಲಿ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಪೂಜೆ ನೆರವೇರಿಸಿದರು. ಬಜೆಟ್ ಮಂಡನೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು.
ಬಳಿಕ ಕೇಂದ್ರ ಹಣಕಾಸು ಸಚಿವಾಲಯದಿಂದ ಬಜೆಟ್ ದಾಖಲೆ ಸ್ವೀಕರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ ದಾಖಲೆಗಳನ್ನು ತೋರಿಸಿದರು. ಈ ವರ್ಷವೂ ವಿತ್ತ ಸಚಿವೆಯ ಸೀರೆ ಗಮನ ಸೆಳೆದಿದೆ. ಬಜೆಟ್ ದಾಖಲೆಯ ಟ್ಯಾಬ್ಲೆಟ್ ಗೆ ಸುತ್ತಿರುವ ಕೆಂಪು ಹೊದಿಕೆಗೆ ಹೊಂದುವಂತಹ ಮ್ಯಾಚಿಂಗ್ ಬಣ್ಣದ ಕೆಂಪು ಸೀರೆಯುಟ್ಟಿರುವುದು ಗಮನ ಸೆಳೆಯಿತು.