ಬೆಳಗಾವಿ:
ಗಡಿ ವಿವಾದ ತಾರಕಕ್ಕೇರುತ್ತಿದಂತೆ ಅದಕ್ಕೆ ಪುಷ್ಟಿ
ನೀಡುವಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಇಂದು ಬೆಳಗಾವಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಗಡಿಬಾಗದ ನಿಪ್ಪಾಣಿಯಲ್ಲಿ ಪೊಲೀಸರು ಹದ್ದಿನ ಕಣ್ಣು ಇಟ್ಟಿದು,ರಾಜ್ ಯಾವ ರೀತಿ ರಾಜ್ಯಕ್ಕೆ ಎಂಟ್ರಿ ಕೊಡತ್ತಾರೆ ಎಂಬುದೇ ಕೂಲಹಲಕಾರಿಯಾಗಿದೆ, ಏಕೆಂದರೆ
ಗಡಿವಿವಾದ ಅಂತಿಮ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ಕ್ಷಣ ಗಣನೆ ಶುರುವಾಗಿದೆ.
ಸಾಂಬ್ರಾ ವಿಮಾನ ನಿಲ್ದಾಣ ಮೂಲಕ ಬೆಳಗಾವಿಗೆ
ಆಗಮಿಸಬಹುದು ಆದರೆ, ಪೊಲೀಸರು ಈ ಹಂತದಲ್ಲಿ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುವುದೇ ರೋಚಕವಾಗಿದೆ.
ಹೀಗಿರುವಾಗಲೇ ಕೆಲ ನಾಡ ದ್ರೋಹಿ
ಎಂಇಎಸ್ ಪುಂಡರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ರಾಜ್ ಠಾಕ್ರೆಯನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಇದೆ.