ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್
ಜೊತೆ ಪ್ರಾಮಿಸ್ ಪಾಲಿಟಿಕ್ಸ್
ಬೆಳಗಾವಿ:
ಜಿಲ್ಲೆಯ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್
ಪಾಲಿಟಿಕ್ಸ್ ಆಯ್ತು ಈಗ ಪ್ರಾಮಿಸ್ ಪಾಲಿಟಿಕ್ಸ್
ಪ್ರಾರಂಭವಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ
ಲಕ್ಷ್ಮೀ ಹೆಬ್ಬಾಳ ಕ್ಷೇತ್ರದ ಜನರಿಗೆ ತೆಂಗಿನಕಾಯಿ
ಮೇಲೆ ಆಣೆ ಪ್ರಮಾಣ ಮಾಡಿಸಿ ಮಿಕ್ಸರ್ ಡ್ರೈಂಡರ್
ನೀಡುತ್ತಿರುವ ಆರೋಪ ಕೇಳಿಬಂದಿದೆ.
ಶಾಸಕಿ ಲಕ್ಷ್ಮೀ ಹೆಬ್ಬಾಳರ್ ವಿರುದ್ಧ ಬಿಜೆಪಿ ಮುಖಂಡ
ಧನಂಜಯ ಜಾಧವ್ ಗಂಭೀರ ಆರೋಪ ಮಾಡಿದ್ದು,
ಆಣೆ ಪ್ರಮಾಣ ಮಾಡಿಸುವವರ ತರಾಟೆಗೆ
ತಗೆದುಕೊಳ್ಳುವ ವೀಡಿಯೋವೊಂದನ್ನು ಧನಂಜಯ
ಜಾಧವ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೇ
ಮಹಿಳೆಯರು ಮಿಕ್ಸರ್ ಡ್ರೈಂಡರ್ ಒಯ್ಯುತ್ತಿರುವ
ವೀಡಿಯೋ ರಿಲೀಸ್ ಮಾಡಿದ್ದು ತೆಂಗಿನಕಾಯಿ ಹಿಡಿದ
ಆಣೆ ಮಾಡಿಸಿ ಮಿಕ್ಸರ್ ಡ್ರೈಂಡರ್ ನೀಡುತ್ತಿರುವ ಶಾಸಕ
ಲಕ್ಷ್ಮೀ ಹೆಬ್ಬಾಳರ್, ನಿಜವಾದ ಅಭಿವೃದ್ಧಿ ಮಾಡಿದ್ದರೆ ಆಣೆ
ಪ್ರಮಾಣ ಏಕೆ ಮಾಡಿಸುತ್ತಿದ್ದಿರಿ ಎಂದು ಪ್ರಶ್ನೆ
ಮಾಡಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳರ್ ಚೇಲಾಗಳು ಪ್ರತಿ ಮನೆಗೆ
ತೆರಳಿ ಆಣೆ ಮಾಡಿಸುತ್ತಿದ್ದಾರೆ. ಇದಕ್ಕೆ ಬೆಳಗಾವಿ
ಗ್ರಾಮೀಣ ಕ್ಷೇತ್ರದಲ್ಲಿ ಜನರು ವಿರೋಧ
ವ್ಯಕ್ತಪಡಿಸುತ್ತಿದ್ದಾರೆ. ನಮಗೆ ವೋಟ್ ಹಾಕಬೇಕು
ಅಂತಾ ಆಣೆ ಮಾಡಿಸುತ್ತಿದ್ದಾರೆ. ಈ ರೀತಿಯ ನೀಚ
ರಾಜಕಾರಣ ವಿರೋಧ ಮಾಡುತ್ತಿದ್ದೇನೆ. ಇನ್ನೂರು ರೂ.
ವಸ್ತು ನೀಡಿ ವೋಟ್ ಹಾಕಬೇಕೆಂದು ಆಣೆ
ಮಾಡಿಸುತ್ತಿದ್ದೀರಾ? ಇಂತಹ ರಾಜಕಾರಣ
ಮಾಡಬಾರದು ಎಂದು ಧನಂಜಯ ಜಾಧವ್
ಕಿಡಿಕಾರಿದ್ದಾರೆ.