ಅನಿಲ ಬೆನಕೆ ಸಾರಥ್ಯದಲ್ಲಿ ವಿಜಯ ಸಂಕಲ್ಪ ಅಭಿಯಾನ.
ಬೆಳಗಾವಿ :
ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನ ಜನವರಿ 21 ರಿಂದ ಆರಂಭಗೊಂಡಿರುವ ಅಭಿಯಾನ ಇಂದು ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು ಬೆಳಗಾವಿ ಶಾಹು ನಗರದ 42 – 43 ವಾರ್ಡಗಳಗಳಲ್ಲಿ ವಿಜಯ ಸಂಕಲ್ಪ ಅಭಿಯಾನವನ್ನು ಚಾಲನೆ ನೀಡಿದರು.
ಭಾರತಕ್ಕಾಗಿ ನವ ಕರ್ನಾಟಕ ಅಮೃತ್ ಮಹೋತ್ಸವದ ಅಮೃತ ಯೋಜನೆಗಳಾದ ಅಮೃತ್ ಗ್ರಾಮ ಪಂಚಾಯ್ತಿ, ಅಮೃತ ಗ್ರಾಮೀಣ ವಸತಿ, ಅಮೃತ ಆರೋಗ್ಯ, ಮೂಲಸೌಕರ್ಯಗಳ ಉನ್ನತಿಕರಣ ಅಮೃತ್ ನಿರ್ಮಲ ನಗರ, ಅಮೃತ್ ಶಾಲಾ ಸೌಲಭ್ಯ, ಅಮೃತ್ ಕೌಶಲ್ಯ ತರಬೇತಿ, ಹಾಗೂ ಅಮೃತ ನಗರೋತ್ಥಾನ ಯೋಜನೆಗಳ ಕುರಿತು ಮನೆ ಮನೆಗೆ ತರಳಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರಸೇವಕರಾದ ಶ್ರೇಯಸ್ ನಕಾಡಿ, ರೇಷ್ಮಾ ಪಾಟೀಲ್ ಮತ್ತು ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಭಾಗಿಯಾಗಿದ್ದರು