ಜ. 6ರಂದು ಕುಂದಾನಗರಿಗೆ ಹ್ಯಾಟ್ರಿಕ್ ಹಿರೋ ಬೈರಾಗಿ ಆಗಮನ
ಬೆಳಗಾವಿ: ಜ. 6ರಂದು ಬೆಳಗಾವಿಗೆ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಆಗಮಿಸುತ್ತಿದ್ದಾರೆ ಎಂದು ಬೆಳಗಾವಿ ರಾಜವಂಶ ಶಿವಸೈನ್ಯ ಜಿಲ್ಲಾಧ್ಯಕ್ಷ ನಿತಿನ್ ತಿಳಿಸಿದ್ದಾರೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ. 6ರಂದು ಮಧ್ಯಾಹ್ನ 12 ಗಂಟೆಗೆ ಚನ್ನಮ್ಮ ವೃತ್ತಕ್ಕೆ ಆಗಮಿಸುವ ನಟ ಶಿವರಾಜಕುಮಾರ ಕಿತ್ತೂರು ರಾಣಿ ಚನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವರು.
ಅಲ್ಲಿಂದ ಕಾಕತಿವೇಸ ಮೂಲಕ ತೆರೆದ ವಾಹನದಲ್ಲಿ ಡೊಳ್ಳು ಕುಣಿತದೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಚಿತ್ರಾ ಮಂದಿರಕ್ಕೆ ಆಗಮಿಸಿ, ಅಭಿಮಾನಿಗಳ ಜತೆ ವೇದ ಚಿತ್ರ ವೀಕ್ಷಿಸಲಿದ್ದಾರೆ ಎಂದರು.
ಶಿವರಾಜಕುಮಾರ ಜತೆಗೆ ಪತ್ನಿ, ಚಿತ್ರದ ನಿರ್ಮಾಪಕಿ ಗೀತಾ,ಚಿತ್ರನಟಿ, ಅದಿತಿ ಅರುಣಸಾಗರ, ನಿರ್ದೆಶಕ ಹರ್ಷಾ ಸೇರಿ ಇನ್ನಿತರರು ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಬೇಕು ಎಂದು ಕೇಳಿಕೊಂಡರು.