1.40 ಕೋಟಿ ರೂ. ವೆಚ್ಚದ ಬೆಳಗುಂದಿ ಬೆಳಗಾವಿ ರಸ್ತೆಗೆ ಶಾಸಕಿ ಹೆಬ್ಬಾಳಕರ್ ಚಾಲನೆ

1.40 ಕೋಟಿ ರೂ. ವೆಚ್ಚದ

ಬೆಳಗುಂದಿ ಬೆಳಗಾವಿ ರಸ್ತೆಗೆ ಶಾಸಕಿ

ಹೆಬ್ಬಾಳಕರ್ ಚಾಲನೆ

ಬೆಳಗಾವಿ :

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮದಿಂದ ಬೆಳಗಾವಿ ವರೆಗೆ ರಸ್ತೆಯನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ 1.40 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕಲ್ಲಿಕೋಳ ಕಾರ್ವದ್ ವಾಗಿ ಪ್ರದೇಶದಲ್ಲಿ ಸೋಮವಾರ ಭೂಮಿ ಪೂಜೆಯನ್ನು ಕೈಗೊಂಡು ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕ್ಷೇತ್ರದಲ್ಲಿ ಬಹುಕೋಟಿ ವೆಚ್ಚದಲ್ಲಿ ಈವರೆಗೆ ಅನೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದು ರಾಜ್ಯದಲ್ಲಿ ಮಾದರಿ ಕ್ಷೇತ್ರವಾಗಿ ರೂಪುಗೊಳಿಸಲಾಗುತ್ತಿದೆ. ಇನ್ನೂ ಹೆಚ್ಚು ಅಭಿವೃದ್ಧಿಯ ಗುರಿ ಹೊಂದಿದ್ದು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮನೋಹರ್ ಬೆಳಗಾಂವರ್, ಮಹೇಶ ಪಾಟೀಲ,ನಾಮದೇವ ಮೋರೆ, ಮಲ್ಲಪ್ಪ ಪಾಟೀಲ, ಶಿವಾಜಿ ಪಾಟೀಲ, ಭಾಗಣ್ಣ ನರೋಟಿ, ಪರಶುಪಾಮ ಬಾಸ್ಕಳ, ಮನೋಹರ ಪಾಟೀಲ,ರೆಹಮಾನ್ ತಹಶಿಲ್ದಾರ, ಶಿವಾಜಿ ಬೆಟಗೇರಿಕರ್, ಶಿವಾಜಿ ಬೋಕಡೆ,ಮಹಾದೇವ ಪಾಟೀಲ, ಪ್ರಭಾಕರ್ ಚಿರಮುರ್ಕರ್, ನಿಂಗೂಲಿ ಚೌಹಾನ್, ವನಿತಾ ಪಾಟೀಲ, ಮಾರುತಿ ಪಾಟೀಲ, ಮದನ ಬಿಜಗಿರಕಸ್, ಪರುಶರಾಮ ಯಳ್ಳೂರಕರ್‌, ವಿಲಾಸ ಪಾಟೀಲ,ದಾಕಳು ಪಾಟೀಲ, ಯಲ್ಲಪ್ಪ ಕಕಾಂಬರ್, ಕಲ್ಲಪ್ಪ ಕನ್ನೂರಕರ್, ರವಿ ಜಾಧವ್, ರಂಜನಾ ಗಾವ, ಅಪ್ತ ಸಹಾಯಕರು ಹಾಗೂ ಪಕ್ಷದಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Previous post ಬೆಳಗಾವಿ ಗಡಿ ವಿವಾದ: ಮುಕುಲ್ ರೋಹಟಗಿ ಜತೆ ಸಿಎಂ ಬೊಮ್ಮಾಯಿ ಇಂದು ಚರ್ಚೆ
Next post ನಾಳೆಯೂ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿವಾದದ ವಿಚಾರಣೆ ಇಲ್ಲ