ಬೆಳಗಾವಿ ಗಡಿ ವಿವಾದ: ಮುಕುಲ್ ರೋಹಟಗಿ ಜತೆ ಸಿಎಂ ಬೊಮ್ಮಾಯಿ ಇಂದು ಚರ್ಚೆ

ಬೆಳಗಾವಿ ಗಡಿ ವಿವಾದ: ಮುಕುಲ್

ರೋಹಟಗಿ ಜತೆ ಸಿಎಂ ಬೊಮ್ಮಾಯಿ

ಇಂದು ಚರ್ಚೆ

ಬೆಂಗಳೂರು:

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಪ್ರಕರಣ ಇದೇ 30 ರಂದು ಸುಪ್ರೀಂ ಕೋರ್ಟ್ನನಲ್ಲಿ ವಿಚಾರಣೆಗೆ ಬರಲಿದೆ. ನ್ಯಾಯಾಲಯದಲ್ಲಿ ರಾಜ್ಯದ ನಿಲುವನ್ನು ಪ್ರತಿಪಾದಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮುಕುಲ್ ರೋಹಟಗಿ ಜತೆ ಮಂಗಳವಾರ ಚರ್ಚೆ ನಡೆಸಲಿದ್ದಾರೆ.

 

ಸಭೆಯ ಬಳಿಕ ಬೊಮ್ಮಾಯಿ ಅವರು ಕೇಂದ್ರ ಸಚಿವ ಪೀಯೂಷ್ ಗೋಯೆಲ್ ಮತ್ತು ಒಂದಿಬ್ಬರು ಕೇಂದ್ರ ಸಚಿವರನ್ನೂ ಭೇಟಿ ಮಾಡಲಿದ್ದಾರೆ. ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಭೇಟಿಗೂ ಸಮಯ ಕೇಳಿದ್ದು, ಇನ್ನೂ ಸಮಯ ಕೊಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಸುದ್ದಿಗಾರರ ಜತೆ ಮಾತ ನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಈವರೆಗೆ ಕಾಂಗ್ರೆಸ್ ಪಕ್ಷವೇ ಸಂವಿಧಾನ ವನ್ನು ತಿರುಚಿರುವುದು ಎಂದರು.

‘ಬಿಜೆಪಿ ಸಂವಿಧಾನವನ್ನು ತಿರುಚಿದೆ’ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಸಂವಿಧಾನವನ್ನು ಗಾಳಿಗೆ ತೂರಿ ತುರ್ತು ಪರಿಸ್ಥಿತಿಯನ್ನು ಹೇರಿದ್ದು ಕಾಂಗ್ರೆಸ್. ವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಎಲ್ಲರನ್ನೂ ಜೈಲಿಗೆ ಹಾಕಿದ ಕಾಂಗ್ರೆಸ್ಕ್ಷ ದಿಂದ ಪಾಠ ಕಲಿಯುವ ಅಗತ್ಯವಿಲ್ಲ’ ಎಂದರು.

Leave a Reply

Your email address will not be published. Required fields are marked *

Previous post पंतप्रधान नरेंद्र मोदी यांना ईमेल द्वारे मारण्याची द्वार धमकी;माजी आय.आय.टी विद्यार्थ्याला अटक
Next post 1.40 ಕೋಟಿ ರೂ. ವೆಚ್ಚದ ಬೆಳಗುಂದಿ ಬೆಳಗಾವಿ ರಸ್ತೆಗೆ ಶಾಸಕಿ ಹೆಬ್ಬಾಳಕರ್ ಚಾಲನೆ