ನಾಳೆಯೂ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿವಾದದ ವಿಚಾರಣೆ ಇಲ್ಲ

NATIONAL
BIG NEWS : ನಾಳೆಯೂ ಕೂಡ
ಸುಪ್ರೀಂ ಕೋರ್ಟ್‌ನಲ್ಲಿ ಗಡಿ
ವಿವಾದದ ವಿಚಾರಣೆ ಇಲ್ಲ

ಬೆಳಗಾವಿ : ಗಡಿ ವಿವಾದದ ಬಗ್ಗೆ ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಿಗದಿಯಾಗಿತ್ತು, ಆದರೆ ನಾಳೆ ವಿಚಾರಣೆ ನಡೆಯುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ತೀರ್ಪು
ಪ್ರಕಟಿಸಬೇಕಾಗಿದ್ದ ನ್ಯಾಯಮೂರ್ತಿ ಕೆ.ಎಂ ಜೋಸೆಫ್ ಸಾಂವಿಧಾನಿ ಕಪೀಠದಲ್ಲಿ ನಿರಂತರ ಕೆಲಸವಿರುದರಿಂದ ನಾಳೆ ವಿಚಾರಣೆ ನಡೆಸಲಾಗುತ್ತಿಲ್ಲ  ಎಂಬ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ನಾಳೆಯೂ ಕೂಡ ಬೆಳಗಾವಿ ಗಡಿ ವಿವಾದದ ತೀರ್ಪು ಪ್ರಕಟವಾಗುವುದಿಲ್ಲ.

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆ ಮುನ್ನೆಚ್ಚರಿಕ ಕ್ರಮವಾಗಿ ಇಂದು ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಎರಡೂ ರಾಜ್ಯಗಳ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿತ್ತು.ಸಭೆ ಬಳಿಕ ಮಾತನಾಡಿದ್ದ ಅಲೋಕ್ ಕುಮಾರ್, ಸುಪ್ರೀಂಕೋರ್ಟ್
ನಲ್ಲಿ ನಾಳೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಬಗ್ಗೆ ತೀರ್ಪು ಪ್ರಕಟಿಸಿದರೂ ಏನೂ ಗಲಾಟೆ ಆಗಬಾರದು. ಹೀಗಾಗಿ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದೆ.ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಕಾರ್ಯತಂತ್ರ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಅವರು ತಿಳಿಸಿದ್ದರು.

Leave a Reply

Your email address will not be published. Required fields are marked *

Previous post 1.40 ಕೋಟಿ ರೂ. ವೆಚ್ಚದ ಬೆಳಗುಂದಿ ಬೆಳಗಾವಿ ರಸ್ತೆಗೆ ಶಾಸಕಿ ಹೆಬ್ಬಾಳಕರ್ ಚಾಲನೆ
Next post उद्याही सर्वोच्च न्यायालयात सीमा वादावर सुनावणी होत नाही