ಶಾ.ಅಭಯ ಪಾಟೀಲ ಆಯೋಜಿಸಿದ್ದ ಹೋಳಿ ಮಿಲನ ಕಾರ್ಯಕ್ರಮಕ್ಕೆ ಯುವಕರಿಂದ ಅಭೂತಪೂರ್ವ ಪ್ರತಿಕ್ರಿಯೆ
ಬೆಳಗಾವಿ
ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಹೋಳಿ ಮಿಲನ್ ಉತ್ಸವ ಆಯೋಜಿಸಲಾಗಿದ್ದು, ಬೆಳಗಾವಿಯ ಹೋಳಿ ಉತ್ಸವಕ್ಕೆ ಮತ್ತಷ್ಟು ವೈಭವವನ್ನು ತಂದುಕೊಟ್ಟಿತು.
ಬೆಳಗಾವಿ ದಕ್ಷಿಣ ಶಾ. ಅಭಯ್ ಪಾಟೀಲ ಅವರು ಈ ಉತ್ಸವವನ್ನು ಆಯೋಜಿಸಿದ್ದರು.ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡಿದ್ದು ಕಂಡುಬಂತು.
ಬಣ್ಣಗಳ ಎರಚುವಿಕೆಯಲ್ಲಿ ಮುಳುಗಿದ್ದ ಯುವಕರು ಸಂಭ್ರಮದಿಂದ ಬಣ್ಣದ ಹಬ್ಬ ಆಚರಿಸಿದರು.ಈ ಮಾರ್ಗದ ಎಲ್ಲ ರಸ್ತೆಗಳು ನಗರದ ಮೂಲೆ ಮೂಲೆಗಳಿಂದ ಯುವಕರ ದಂಡು ತುಂಬಿದ್ದವು.
ಈ ಹಬ್ಬದ ಆರಂಭದಲ್ಲಿ.ಅಭಯ ಪಾಟೀಲ ನಾಗರಿಕರಿಗೆ ಹೋಳಿ ಹಬ್ಬದ ಶುಭಾಶಯ ಕೋರಿದರು.ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಬೆಳಗಾವಿಯ ಜನತೆ ಬಣ್ಣದ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿದರು.
ಬೆಳಗಾವಿಯ ಜನತೆ ಮಂಗಳವಾರ ಅಭೂತಪೂರ್ವ ಸಂಭ್ರಮದಿಂದ ವಿವಿಧ ಬಣ್ಣಗಳನ್ನು ಎರಚುತ್ತಾ ರಂಗೋತ್ಸವ ಆಚರಿಸಿದರು.ಈ ವರ್ಷ, ಯಾವುದೇ ನಿರ್ಬಂಧಗಲಿರಲ್ಲಿಲ ಆದ್ದರಿಂದ ಯುವಕರ ಉತ್ಸಾಹವು ಏರಿತು. ಸಂಗೀತದ ಬೀಟ್ಗೆ ಯುವಕರು ತಾಳ ಹಾಕಿದರು.