ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆ ಶುದ್ದೀಕರಣಕ್ಕೆ ಮುಂದಾದ ಎಂಇಎಸ್

ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆ ಶುದ್ದೀಕರಣಕ್ಕೆ ಮುಂದಾದ ಎಂಇಎಸ್

ಬೆಳಗಾವಿ:

‘ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ ಈಚೆಗಷ್ಟೇ ಲೋಕಾರ್ಪಣೆಯಾರ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಅಪಚಾರ ಮಾಡಿದ್ದು ಮಾರ್ಚ್ 19ರಂದು ಇಡೀ ದಿನ ಪ್ರತಿಮೆ ಶುದ್ದೀಕರಣ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ತಿಳಿಸಿದೆ.

ಇಲ್ಲಿನ ಮರಾಠಾ ಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಎಂಇಎಸ್ ನಾಯಕರು ಒಮ್ಮತದಿಂದ ಈ ನಿರ್ಣಯ ಕೈಗೊಂಡರು.’ಛತ್ರಪತಿ ಅವರ ಪ್ರತಿಮೆ ಹಾಗೂ ಕೀರ್ತಿಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ರಾಜಕೀಯಕ್ಕೆ ಬಳಸಿದ್ದಾರೆ. ಇದು ಅಕ್ಷಮ್ಯ. ಈ ಪ್ರತಿಮೆ ಶುದ್ಧಗೊಳಿಸುವುದು ಅಗತ್ಯ. ಅದರ ಅಂಗವಾಗಿ ಶಿವಾಜಿ ಮಹಾರಾಜರ ಪಾದಪೂಜೆ, ಪಂಚಾಮೃತ ಅಭಿಷೇಕ ಮತ್ತಿತರ ಕಾರ್ಯಕ್ರಮ ನಡೆಯಲಿವೆ’ ಎಂದು ಮುಖಂಡರು ತಿಳಿಸಿದರು.

‘ಮಹಾರಾಷ್ಟ್ರದ ಕೊಲ್ಲಾಪುರ, ಸಾತಾರ ಮತ್ತು ಜಿಲ್ಲೆಯ ವಿವಿಧೆಡೆ ಇರುವ ಶಿವಾಜಿ ಮಹಾರಾಜರ ಇತಿಹಾಸ ಸಾರುವ ಕೋಟೆಗಳಿಂದ ಶಿವಜ್ಯೋತಿ ತಂದು, ನಗರದಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ರಾಜಹಂಸಗಡಕ್ಕೆ ತೆಗೆದುಕೊಂಡು ಹೋಗಲಾದು ತಿಳಿಸಿದರು.

ಮುಖಂಡರಾದ ದೀಪಕ ದಳವಿ, ಮನೋಹರ ಕಿಣೇಕರ್,ಎಂ.ಜಿ.ಪಾಟೀಲ, ಪ್ರಕಾಶ ಮರಗಾಲೆ, ವಿಕಾಸ ಕಲಘಟಗಿ ಇತರರು ಇದ್ದರು.

Leave a Reply

Your email address will not be published. Required fields are marked *

Previous post चित्रपटसृष्टीला आणखी एक धक्का : ज्येष्ठ अभिनेते, दिग्दर्शक सतीश कौशिक यांचे निधन
Next post राजहंसगडावरील छ. शिवाजी महाराजांच्या मूर्तीचे शुद्धीकरण 19 मार्च रोजी; एम. ई. एस