ಬೆಳಗಾವಿ ಅಧಿವೇಶನದಲ್ಲೂ ಮಾಸ್ ಕಡ್ಡಾಯ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ |
23 Dec 22 ,
ಬೆಳಗಾವಿ :
ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಮಾಸ್ ಕಡ್ಡಾಯ ಹಿನ್ನೆಲೆ ಬೆಳಗಾವಿ ಅಧಿವೇಶನದಲ್ಲೂ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ
ಕೋವಿಡ್-19 ಪರೀಕ್ಷೆಗಳ ಕೊರತೆಯಿಂದಾಗಿ ಪ್ರಕರಣಗಳು ಹೆಚ್ಚಿವೆ. ವರದಿಯ ಪ್ರಕಾರ, ಚೀನಾದಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ 800 ಮಿಲಿಯನ್ಜನರು ಸೋಂಕಿಗೆ ಒಳಗಾಗಬಹುದು.
2023 ರಲ್ಲಿ ಚೀನಾದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಭಾರಿ ಹೆಚ್ಚಳದಿಂದಾಗಿ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಸಾಯಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ಪ್ರಪಂಚದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು (Covid-19) ಉಲ್ಬಣಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಡಿ 22ರಂದು ಉನ್ನತ ಮಟ್ಟದ ಸಭೆ ನಡೆಸಿದರು.
ಸಭೆಯಲ್ಲಿ ಕೋವಿಡ್ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದು, ಇದೀಗ ಕೇಂದ್ರ ಸರ್ಕಾರ ವಿದೇಶದಿಂದ ಆಗಮಿಸುವವರಿಗೆ ಹೊಸ ಮಾರ್ಗಸೂಚಿ (guidelines) ಪ್ರಕಟಿಸಿದೆ.
ವಿದೇಶದಿಂದ ಬರುವವರು ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದಿರಬೇಕು.ಏರ್ಪೋರ್ಟ್ಗಳಲ್ಲಿ ಮಾಸ್ಕ್ ಹಾಗೂ ದೈಹಿಕ ಅಂತರ ಪಾಲಿಸಬೇಕು. ಏರ್ಪೋರ್ಟ್ಗಳಲ್ಲಿ
ಥರ್ಮಲ್ ಸ್ಟೀನಿಂಗ್ ಕಡ್ಡಾಯ. ಕೊವಿಡ್ ಗುಣಲಕ್ಷಣ ಕಂಡುಬಂದ್ರೆ ಐಸೋಲೇಷನ್ ಕಡ್ಡಾಯ. ಇನ್ಮುಂದೆ
ಏರ್ಪೋರ್ಟ್ಗಳಲ್ಲಿ ಅಂಡಮ್ ಟೆಸ್ಟ್ ಕಡ್ಡಾಯ.ಪಾಸಿಟಿವ್ ಬಂದ್ರೆ ಜಿನೋಮಿಕ್ ಸೀಕ್ವೆನ್ಸ್ ಕಡ್ಡಾಯ.
12 ವರ್ಷದೊಳಗಿನ ಮಕ್ಕಳಿಗೆ ರ್ಯಾಂಡಮ್ ಟೆಸ್ಟ್
ಅಗತ್ಯವಿಲ್ಲ. 12 ವರ್ಷದೊಳಗಿನವರಿಗೆ ಸೋಂಕಾದ್ರೆ
ಮನೆಯಲ್ಲೇ ಐಸೋಲೇಷನ್ನಲ್ಲಿ ಇರಬೇಕಾಗಿದೆ