31 ರಂದು ಪಾಲಿಕೆ ಮೇಯರ್ ಚುನಾವಣೆ.

31 ರಂದು ಪಾಲಿಕೆ ಮೇಯರ್ ಚುನಾವಣೆ.

ಬೆಳಗಾವಿ.

ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ನಾಳೆ ದಿ.‌12 ರಂದು ಅಧಿಸೂಚನೆ ಹೊರಬೀಳಲಿದೆ.

ಬೆಳಗಾವಿ ಪ್ರಾದೇಶಿಕ‌ ಆಯುಕ್ತ ಎಂ.ಜಿ. ಹಿರೇಮಠ ಅವರು ನಾಳೆ‌ಈ ಬಗ್ಗೆ ಅಧಿಕೃತ ನೋಟೀಸ್ ಜಾರಿ ಮಾಡಲಿದ್ದಾರೆ.
ಬಹುಶಃ‌ ಬರುವ 31 ರಂದು ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ಕಳೆದ ದಿ.‌9 ರಂದು ನಗರಾಭಿವೃದ್ಧಿ ಇಲಾಖೆ ಆಧೀನ ಕಾರ್ಯದರ್ಶಿಗಳು 21 ನೇ ಅವಧಿಗೆ ಚುನಾವಣೆ ನಡೆಸುವಂತೆ ಪತ್ರವನ್ನು ಕಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾರ್ಯಕ್ರವೃತ್ತರಾದ ಪ್ರಾದೇಶಿಕ‌ ಆಯುಕ್ತರು ನಾಳೆ ದಿ.‌12 ರಂದು ನೋಟಿಸ್ ಜಾರಿ ಮಾಡಿ ಪ್ರಕ್ರಿಯೆ ಆರಂಭಿಸಲಿದ್ದಾರೆ.

ಬೆಳಗಾವಿ ಪಾಲಿಕೆಯ ಮೇಯರ‌ ಸ್ಥಾನವು ಸಾಮಾನ್ಯ ಮಹಿಳೆ ಮತ್ತು ಉಪಮೇಯರ್ ಸ್ಥಾನವು ಹಿಂದುಳಿದ ವರ್ಗ ಬ‌ ಮಹಿಳೆಗೆ ಮೀಸಲಾಗಿದೆ

Leave a Reply

Your email address will not be published. Required fields are marked *

Previous post सरकारी इमारतीला नगरपंचायतीची परवानगी गरजेची नाही
Next post बेळगाव ग्रामीण मतदारसंघात भेटवस्तू वाटपावरून आमदार लक्ष्मी हेब्बाळकर यांचा अपमान