ಸವದತ್ತಿ : ನೀರಿನ ಸಂಪಿಗೆ ಬಿದ್ದು ಇಬ್ಬರು ಮಕ್ಕಳು ಸಾವು
ಸವದತ್ತಿ : ನೀರಿನ ಸಂಪಿಗೆ ಬಿದ್ದು
ಇಬ್ಬರು ಮಕ್ಕಳು ಸಾವು.
ಬೆಳಗಾವಿ:
ವಾಲ್ಮೀಕಿ ಭವನದ ನಿರ್ಮಾಣ ಹಂತದ ಸಂಪ್ ನಲ್ಲಿ ಬಿದ್ದು ನರ್ಸರಿಯಲ್ಲಿ ಓದುತ್ತಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಗೂರ್ಲಹೊಸೂರ ಕಾಲೋನಿಯಲ್ಲಿ ನಡೆದಿದೆ.
ನಾಲ್ಕು ವರ್ಷದ ಶ್ಲೋಕ ಗುಡಿ ಹಾಗೂ ಚಿದಾನಂದ ಸಾಳುಂಕೆ ಮೃತ ದುರ್ದೈವಿಗಳು. ಪ್ರಾಥಮಿಕ ಶಾಲೆಯಲ್ಲಿ ನರ್ಸರಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳು ಮಧ್ಯಾಹ್ನ ಆಟವಾಡಲು ಶಾಲೆಯಿಂದ ಹೊರಬಂದಿದ್ದಾರೆ.
ಈ ವೇಳೆ ನೀರಿನ ಸಂಪ್ ನಲ್ಲಿ ಬಿದ್ದು ಇಬ್ಬರೂ ಸಾವನ್ನಪ್ಪಿದ್ದಾರೆ.ಘಟನಾ ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.