ಬೆಳಗಾವಿಗೂ ವ್ಯವಹಾರ ವಿಸ್ತರಿಸಿದ
ಜಾಗತಿಕ ಸಂಸ್ಥೆ ಫೋರ್ಸ್
ಎಂಟಿಯು
ಬೆಳಗಾವಿ:
ಜನರೇಟರ್ ಮತ್ತು ಎಂಜಿನ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಜಾಗತಿಕ ಮಟ್ಟದ ಫೋರ್ಸ್ ಎಂಟಿಯು ಸಂಸ್ಥೆ ಬೆಳಗಾವಿಯನ್ನು ಕೇಂದ್ರವಾಗಿರಿಸಿಕೊಂಡು ಉತ್ತರ ಕರ್ನಾಟಕಕ್ಕೂ ತನ್ನ ವ್ಯವಹಾರವನ್ನು ವಿಸ್ತರಿಸಿದೆ.
ಅಮೇರಿಕಾ, ಯುರೋಪ್ ಸೇರಿದಂತೆ ವಿಶ್ವದಾದ್ಯಂತ ಮಾರುಕಟ್ಟೆ ಜಾಲ ಹೊಂದಿರುವ ಫೋರ್ಸ್ ಎಂಟಿಯೂ ಜರ್ಮನ್ ಮೂಲದ ಸುಪ್ರಸಿದ್ಧ ರೋಲ್ಸ್ ರಾಯ್ಸ್ ನ ಸಹಭಾಗಿತ್ವದ ಸಂಸ್ಥೆಯಾಗಿದೆ.
ಕಳೆದ ಒಂದೂವರೆ ವರ್ಷದಿಂದ ಎಂಜಿನ್ ಉತ್ಪಾದನೆಯನ್ನೂ ಆರಂಭಿಸಿದ್ದು, ಭಾರತೀಯ ರೈಲ್ವೆ ಜೊತೆಗೂ ರೈಲ್ವೆ ಎಂಜಿನ್ ಪೂರೈಕೆ ಒಪ್ಪಂದ ಮಾಡಿಕೊಂಡಿದೆ. ಜಾಗತಿಕವಾಗಿ ಯಾವುದೇ ವ್ಯತ್ಯಾಸವಿಲ್ಲದೆ ಏಕರೂಪದ ಗುಣಮಟ್ಟ ಕಾಯ್ದುಕೊಂಡಿರುವುದೂ ಸಂಸ್ಥೆಯ ವಿಶೇಷತೆಯಾಗಿದೆ.
ಅತ್ಯಂತ ಹೆಚ್ಚು ಬಾಳಿಕೆಯ ಬಿಡಿಭಾಗಗಳ ಮೂಲಕ ಗುಣಮಟ್ಟದಲ್ಲಿ ಎಲ್ಲರಿಗಿಂತ ಅಗ್ರಗಣ್ಯ ಎನಿಸಿದೆ ಎಂದು ಅವರು ವಿವರಿಸಿದರು.
ಡೆಪ್ಯುಟ್ ಸಿಒಒ ದಿನೇಶ ಪಾಟೀಲ ಮಾತನಾಡಿ, ಫೋರ್ಸ್ ಎಂಟಿಯು ಕೇವಲ ಒಂದು ವರ್ಷದೊಳಗೆ ಪುಣೆ ಘಟಕ ಐಎಸ್‌ಒ ಸರ್ಟಿಫಿಕೇಟ್ಪ ಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಅತ್ಯಂತ ಕಡಿಮೆ ನಿರ್ವಹಣೆ ವೆಚ್ಚದಿಂದಾಗಿ ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿದೆ ಎಂದು ತಿಳಿಸಿದರು.
ಪ್ರೊಗ್ರೆಸ್ಲಿವ್ ಟ್ರೇಡರ್ಸ್ ಮಾಲಿಕ ಪರಮೇಶ್ವರ ಹೆಗಡೆ ಮಾತನಾಡಿ,ಕಳೆದ 43 ವರ್ಷಗಳಿಂದ ಪ್ರೊಗ್ರೆಸ್ಲಿವ್ ಟ್ರೇಡರ್ಸ್ ಬೆಳಗಾವಿಯಲ್ಲಿ ವ್ಯವಹಾರ ನಡೆಸುತ್ತಿದ್ದು, ಗ್ರಾಹಕರ ವಿಶ್ವಾಸ ಗಳಿಸಿಕೊಂಡಿದೆ. ಈಗ ಫೋರ್ಸ್ ಎಂಟಿಯು ಮೂಲಕ ಮತ್ತೊಂದು ಹೆಜ್ಜೆ ಮುಂದಿಡಲಾಗಿದೆ.
ಎಂದಿನ ವಿಶ್ವಾಸದೊಂದಿಗೆ ವ್ಯವಹಾರ ವಿಸ್ತರಿಸಲಾಗುವುದು ಎಂದುತಿಳಿಸಿದರು.ಬೆಳಗಾವಿಯ ಮೊದಲ ಗ್ರಾಹಕ ದಯಾನಂದ ನೇತಲಕರ್ಮಾತನಾಡಿ, ಫೋರ್ಸ್ ಎಂಟಿಯು ಪುಣೆಯಲ್ಲಿ ಜಾಗತಿಕ ಮಟ್ಟದ ಉತ್ಪಾದನಾ ಘಟಕ ಸ್ಥಾಪಿಸಿದೆ. ಸಂಸ್ಥೆಯ ಉತ್ಪನ್ನಗಳಉ ಅತ್ಯುತ್ತಮ ಗುಣಮಟ್ಟ ಹೊಂದಿರುವದರಿಂದ ಗ್ರಾಹಕರ ವಿಶ್ವಾಸಗಳಿಸುವಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.
ಫೋರ್ಸ್ ಎಂಟಿಯು ಕ್ವಾಲಿಟ್ ಹೆಡ್ ಶೈಲೇಶ್ ಜಗತಾಪ್, ಅರವಿಂದವಾಳ, ಪ್ರಜಕ್ತಾ ವಾಕಡೆ ಮಾತನಾಡಿದರು. ಖ್ಯಾತ ಉದ್ಯಮಿ ಗೋಪಾಲ ಜಿನಗೌಡ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಋತ್ವಿಕ್ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮೇಧಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.