ಬಿಜೆಪಿ 20 ಹಾಲಿ ಶಾಸಕರಿಗೆ ನಡುಕ ಶುರು:ಟಿಕೆಟ್ ಕೈ ತಪ್ಪುವ ಸಾಧ್ಯತೆ?
ಬೆಂಗಳೂರು:
ಬಿಜೆಪಿ ಅಲೆ ಮೇಲೆ ತೆಳಿ ಆಯ್ಕೆಯಾದ 20 20 ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುತ್ತಾ ಚರ್ಚೆ ನಡೆದಿವೆ.
16 ಜಿಲ್ಲೆಗಳಲ್ಲಿ ಬಿಜೆಪಿ ಹಾಲಿ ಶಾಸಕರಿಗೆ ಕೊಕ್ ಕೊಡುವ ಶಾರ್ಟ್ಲಿ ಲಿಸ್ಟ್ ರೆಡಿ ಆಗ್ತಿದೆ ಎನ್ನಲಾಗಿದೆ.ಚುನಾವಣೆಗೆ ಇನ್ನು ಮೂರೂವರೆ ತಿಂಗಳು ಬಾಕಿ ಇರುವಾಗಲೇ ಟಿಕೆಟ್ ಲೆಕ್ಕಚಾರ ಶುರುವಾಗಿದ್ದು, ಬಿಜೆಪಿ ಟಿಕೆಟ್ ನೀಡಿಕೆಮಾನದಂಡಗಳ ಬಗ್ಗೆ ಪಕ್ಷದ ವೇದಿಕೆಯಲ್ಲೇ ಚರ್ಚೆ ಆಗುತ್ತಿದೆ.
ಗುಜರಾತ್ ಮಾಡೆಲ್, ಉತ್ತರ ಪ್ರದೇಶ ಮಾಡೆಲ್ಗಳಪ್ರಯೋಗದ ಬಗ್ಗೆ ಆತಂಕ ವ್ಯಕ್ತವಾಗಿದೆ. ಬರೋಬ್ಬರಿ 20ಕ್ಕೂಹೆಚ್ಚು ಶಾಸಕರಿಗೆ ಟಿಕೆಟ್ ಕೈ ತಪ್ಪು ಆತಂಕವಿದೆ ಎನ್ನಲಾಗಿದೆ.
ನಾಲ್ಕು ಜಿಲ್ಲೆಗಳಲ್ಲಿ ತಲಾ ಇಬ್ಬರು ಹಾಲಿ ಶಾಸಕರಿಗೆ ಕೊ ಕ್ಕೊಡುವ ಬಗ್ಗೆ ಚರ್ಚೆ ಆಗುತ್ತಿದ್ದರೆ, 12 ಜಿಲ್ಲೆಗಳಲ್ಲಿ ತಲಾ ಒಬ್ಬರು ಹಾಲಿ ಶಾಸಕರಿಗೆ ಕೊಕ್ ಕೊಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆ ಕ್ಷೇತ್ರಗಳಲ್ಲಿ ವೈಯುಕ್ತಿಕ ವರ್ಚಸ್ಸಿನ ಕುಸಿತ,ಆಡಳಿತ ವಿರೋಧಿ ಅಲೆಯ ಬಗ್ಗೆ ಹೈಕಮಾಂಡ್ ವರದಿ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.