“ನಷ್ಟೇ ಪೆ ಚರ್ಚಾ “ನಾಗರಿಕರೊಂದಿಗೆ ಸಂವಾದ ಸಾಧಿಸಲು ಶಾ. ಅಭಯ್ ಪಾಟೀಲ್ ಅವರ ಅಭಿನವ ಉಪಕ್ರಮ.
ಬೆಳಗಾವಿ ಪ್ರತಿನಿಧಿ
ಬೆಳಗಾವಿ ದಕ್ಷಿಣ ಶಾ.ಅಭಯ ಪಾಟೀಲ್ ಅವರು ನಾಗರಿಕರಿಗಾಗಿ “ನಷ್ಟೆ ಪೆ ಚರ್ಚಾ” ಎಂಬ ಉಪಕ್ರಮವನ್ನು ಜಾರಿಗೆ ತಂದಿದ್ದಾರೆ.
ದಕ್ಷಿಣ ಬೆಳಗಾವಿ ನಾಗರಿಕರ ಸಮಸ್ಯೆಗಳ ಕುರಿತು ದೂರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಭಯ ಪಾಟೀಲ ಈ ಚಟುವಟಿಕೆಯನ್ನು ಯೋಜಿಸಿದ್ದಾರೆ.
ದಿನವಿಡೀ ಕೆಲಸದ ಗಡಿಬಿಡಿಯಲ್ಲಿ ನಾಗರಿಕರು ಭೇಟಿಯಾಗುವುದಿಲ್ಲ.ಹಾಗಾಗಿ ಪ್ರತಿನಿತ್ಯ ಮುಂಜಾನೆ ‘ನಷ್ಟೆ ಪೇ ಚರ್ಚಾ’ ಚಟುವಟಿಕೆ ಕೈಗೆತ್ತಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಾಗರಿಕರು ತಮ್ಮ ದೂರುಗಳನ್ನು ಲಿಖಿತ ರೂಪದಲ್ಲಿ ತರಲು ವಿನಂತಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಅಭಯ ಪಾಟೀಲ, ವಾರ್ಡ್ ಕಾರ್ಪೊರೇಟರ್ಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿರುವರು.
ಪ್ರತಿದಿನ ಐದು ವಾರ್ಡ್ಗಳ ನಾಗರಿಕರಿಗೆ , ಐದು ದಿನಗಳ ಕಾಲ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ಜಾರಿಗೊಳಿಸಲಾಗಿದೆ.