ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅಸ್ತಂಗತ:ಶಾಲಾ-ಕಾಲೇಜ ರಜೆ
ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ
ಅಸ್ತಂಗತ:ಶಾಲಾ-ಕಾಲೇಜ ರಜೆ
ವಿಜಯಪುರ:
ನಡೆದಾಡುವ ದೇವರು ಎಂದೇ ಹೆಸರಾಗಿರುವ ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ತೀವ್ರ ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದು ವಿಜಯಪುರ ಜಿಲ್ಲೆಯಾದ್ಯಂತ ಮಾತ್ರ ಇಂದು ಒಂದು ದಿನ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗೆ ರಜೆ ನೀಡಿಲಾಗಿದೆ.
ಸ್ವಾಮಿಗಳು ಸೋಮವಾರ ರಾತ್ರಿ ಅವರು ಕೊನೆಯುಸಿರೆಳೆದರು.ನಿನ್ನೆ ಮಧ್ಯಾಹ್ನದಿಂದಲೇ ಅವರ ದೇಹಸ್ಥಿತಿ ಹದಗೆಟ್ಟಿತ್ತು.ಉಸಿರಾಟ ಮತ್ತು ನಾಡಿಮಿಡಿತ ಏರುಪೇರಾಗಿತ್ತು.
ಅವರ ನಿಧನ ಹಿನ್ನೆಲೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಈ ಮದ್ಯೆ ಕೋವಿಡ್ ನಿಯಮ ಪಾಲನೆ ಮಾಡಲು ಸರ್ಕಾರ ಆದೇಶ ನೀಡಿದೆ.