ಸಹಕಾರಿ ಕ್ಷೇತ್ರದ ಪ್ರಗತಿಗೆ ಬಿಜೆಪಿ ಹಲವು ಯೋಜನೆಗಳನ್ನು ಜಾರಿಗೊಳಿಸಲಿದೆ: ಕೇಂದ್ರ ಸಹಕಾರಿ ಸಚಿವ ಬಿ.ಎಲ್.ವರ್ಮಾ
ಬೆಳಗಾವಿ:
ಶ್ರೀ. ಬಿ.ಎಲ್. ವರ್ಮಾ ಅಭಿವೃದ್ಧಿ ಖಾತೆ ಸಚಿವರು,ಕೇಂದ್ರ ರಾಜ್ಯಮಂತ್ರಿ ,ಸಹಕಾರ ಕ್ಷೇತ್ರ ಮತ್ತು ಈಶಾನ್ಯ ರಾಜ್ಯಗಳ ಬಿಜೆಪಿ ಪ್ರಣಾಳಿಕೆ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಸಲಹೆಗಳನ್ನು ಪಡೆಯಲು ರಾಜ್ಯಮಟ್ಟದ ವಿಷಯವಾರು ಸಭೆ ಇವತ್ತು ಡಾ|| ಬಿ.ಎಸ್. ಕೊಡಕನಿ ಸಭಾಂಗಣ, ನೆಹರೂ ನಗರ,ಬೆಳಗಾವಿಯಲ್ಲಿ, ಮಾಡಲಾಯಿತು.
ಪ್ರಸ್ತಾವನೆಯನ್ನು ಮಹಾನಗರ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಶ್ರೀ.ದಾದಾಗೌಡ ಬಿರಾದಾರ ಅವರು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ, ಶ್ರೀ.ಬಿ.ಎಲ್ ವರ್ಮಾ, ಕೇಂದ್ರ ಸಹಕಾರ ಕ್ಷೇತ್ರ ರಾಜ್ಯಮಂತ್ರಿ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆ ಸಚಿವರು, ಉತ್ತರ ಮತಕ್ಷೇತ್ರದ ಶಾಸಕರು ಹಾಗೂ ಬೆಳಗಾವಿ ಮಹಾನಗರ ಜಿಲ್ಲೆಯ ಅಧ್ಯಕ್ಷರಾದ ಶ್ರೀ.ಅನೀಲ್ ಬೆನಕೆ, ಮಾಜಿ ಶಾಸಕರು ಹಾಗೂ ಗ್ರಾಮಾಂತರ ಅಧ್ಯಕ್ಷರಾದ,ಶ್ರೀ.ಸಂಜಯ ಪಾಟೀಲ. ಉಪ ಮೇಯರರಾದ ಶ್ರೀಮತಿ.ರೇಷ್ಮಾ ಪಾಟೀಲ್, ರಾಜ್ಯ ವಕ್ತಾರರಾದ ಎಂ.ಬಿ.ಝಿರಲಿ, ಮಾಜಿ ವಿ.ಪ ಸದಸ್ಯರಾದ ಮಹಾತೇಂಶ ಕವಟಗಿಮಠ, ಇವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಶ್ರೀ.ದಾದಾಗೌಡ ಬಿರಾದಾರ, ಶ್ರೀ. ಮುರಗೇಂದ್ರಗೌಡ ಪಾಟೀಲ, ಉತ್ತರ ಮಂಡಲ ಅಧ್ಯಕ್ಷರಾದ ಶ್ರೀ. ವಿಜಯ ಕೊಡಗಾನೂರ, ದಕ್ಷಿಣ ಮಂಡಲ ಅಧ್ಯಕ್ಷರಾದ ಶ್ರೀಮತಿ, ಗೀತಾ ಸುತಾರ, ಬೆಳಗಾವಿ ಪ್ರಣಾಳಿಕೆ ಸಲಹಾ ಅಭಿಯಾನದ ಸಹ ಸಂಚಾಲಕರಾದ ಶ್ರೀ. ಈರಯ್ಯಾ ಖೋತ, ಶ್ರೀಮತಿ.ಸಾರಿಕಾ ಪಾಟೀಲ್, ಶ್ರೀ. ಶ್ರೀನಿವಾಸ ಬಿಸನಕೊಪ್ಪ, ಮಾಧ್ಯಮ ಪ್ರಮುಖ, ಶ್ರೀ.ಶರದ ಪಾಟೀಲ, ಸಾಮಾಜಿಕ ಜಾಲತಾಣ ಸಂಚಾಲಕರಾದ ಶ್ರೀ, ಕೇದಾರ ಜೋರಾಪುರ, ನಗರ ಸೇವಕರು ಹಾಗೂ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.