ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಕಿಂಗ್ ಮೇಕರ್ ವರ್ಚಸ್ಸು..ಮೇಯರ್ ಆಗಿ ಶೋಭಾ ಸೋಮನಾಚೆ…ಉಪಮೇಯರ್ ಆಗಿ ರೇಷ್ಮಾಪಾಟೀಲ

ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಕಿಂಗ್ ಮೇಕರ್ ವರ್ಚಸ್ಸು..ಮೇಯರ್ ಆಗಿ ಶೋಭಾ ಸೋಮನಾಚೆ…ಉಪಮೇಯರ್ ಆಗಿ ರೇಷ್ಮಾಪಾಟೀಲ

ಬೆಳಗಾವಿ :

ಬೆಳಗಾವಿ ಮಹಾನಗರ ಪಾಲಿಕೆ ನೂತನ ಮೇಯರ್ ಆಯ್ಕೆ ಇಂದು ನಡೆದಿದೆ.ಬೆಳಗಾವಿ ಮಹಾನಗರಪಾಲಿಕೆಗೆ ಶೋಭಾ ಸೋಮನಾಚೆ ನೂತನ ಮೇಯರ್ ಹಾಗೂ ರೇಷ್ಮಾ ಪಾಟೀಲ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಒಂದೂವರೆ ವರ್ಷದ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಆದರೆ, ಕೆಲ ಕಾರಣಗಳಿಂದ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆದಿರಲಿಲ್ಲ. ಇಂದು ನಡೆದ ನಿರ್ಣಾಯಕಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯವರು ಆಯ್ಕೆಯಾಗಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದಿತ್ತು. ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಿಂಗ್ ಮೇಕರ್ ಬಿಜೆಪಿ ಶಾಸಕರಾದ ಅಭಯ್ ಪಾಟೀಲ  ಅವರು ಮಹತ್ವದ ಪಾತ್ರ ವಹಿಸಿದ್ದರು.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಮೇಯರ್ ಸ್ಥಾನ ಮರಾಠಿ ಭಾಷಿಕರ ಪಾಲಾಗಿರುವುದು ವಿಶೇಷ.

Leave a Reply

Your email address will not be published. Required fields are marked *

Previous post महानगरपालिकेवर किंगमेकरचा करिष्मा..महापौरपदी शोभा…उपमहापौरपदी रेश्‍मा
Next post बेळगाव दक्षिणचे आ. अभय पाटील यांच्या हस्ते खासबाग येथील बायोगॅस प्रकल्पाचे उद्घाटन