
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಚಿಕ್ಕೋಡಿ ಸಬ್ ರಿಜಿಸ್ಟ್ರಾರ್
ಲಂಚ ಸ್ವೀಕರಿಸುವಾಗ
ಲೋಕಾಯುಕ್ತ ಬಲೆಗೆ ಬಿದ್ದ ಚಿಕ್ಕೋಡಿ
ಸಬ್ ರಿಜಿಸ್ಟ್ರಾರ್
ಚಿಕ್ಕೋಡಿ :
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚ
ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ
ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ
ಮುಂದುವರಿಸಿದ್ದಾರೆ.
ಚಿಕ್ಕೋಡಿ ಸಬ್ ರಜಿಸ್ಟಾರ ಜಿ.ಪಿ ಶಿವರಾಜು 30
ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ
ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಜಮೀನು ಖಾತೆ
ಬದಲಾವಣೆ ಹಿನ್ನಲೆಯಲ್ಲಿ ಲಂಚಕ್ಕೆ ಬೇಡಿಕೆ
ಇಟ್ಟಿದ್ದರು ಎಂದು ತಿಳಿದುಬಂದಿದೆ.
ಲೋಕಾಯುಕ್ತ ಎಸ್ಪಿ ಯಶೋಧ ವಂಟಗೊಡಿ
ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಅಧಿಕಾರಿಗಳು
ಪರಿಶೀಲನೆ ನಡೆಸಿದ್ದಾರೆ.