ಬೆಂಗಳೂರಿನಲ್ಲಿ ಅಗ್ನಿ ಅವಘಡ: ಬೆಂಕಿ
ನಂದಿಸಲು ಅಗ್ನಿಶಾಮಕದಳ ಹರಸಾಹಸ
ಬೆಂಗಳೂರು: ಟಿಂಬರ್ ಲೇಔಟ್”ನ ಪ್ರೈವುಡ್
ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ
ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ನಡೆದಿದೆ. ತಡರಾತ್ರಿ
ಅಗ್ನಿ ಅವಘಡ ಸಂಭವಿಸಿದ್ದು, ನವೀನ್ ಗುಪ್ತಾ
ಎಂಬುವವರಿಗೆ ಸೇರಿರುವ ಗೋದಾಮು ಸಂಪೂರ್ಣ
ಭಸ್ಮವಾಗಿದೆ ಎಂದು ತಿಳಿದುಬಂದಿದೆ.
ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು
ಲಕ್ಷಾಂತರ ರೂಪಾಯಿ ಮೌಲ್ಯದ ಪ್ರೈವುಡ್ ಸುಟ್ಟು
ಬೂದದಿಯಾಗಿದೆ. ಮಾಲೀಕ ನವೀನ್ ಗುಪ್ತ ಕಳೆದ 7
ವರ್ಷದಿಂದ ಗೋಡನ್ ನಡೆಸುತ್ತಿದ್ದರು. ರಾತ್ರಿ ಬಿದ್ದ
ಬೆಂಕಿಯಿಂದಾಗಿ ಮಾಲೀಕರು ಆಘಾತಕ್ಕೆ
ಒಳಗಾಗಿದ್ದಾರೆ. ನವೀನ್ ಗುಪ್ತಾ ಸಂಜೆ ಎಂದಿನಂತೆ
ಗೋಡನ್ ಗೆ ಬೀಗಾ ಹಾಕಿ ಹೋಗಿದ್ದಾರೆ.
ಗೋದಾಮಿನಲ್ಲಿ ಯಾರು ಇಲ್ಲದ ಸಮಯದಲ್ಲಿ ಬೆಂಕಿ
ಕಾಣಿಸಿಕೊಂಡಿದೆ.
ಬೆಂಕಿ ದೊಡ್ಡದಾಗುತ್ತಿದ್ದಂತೆ ಸುತ್ತಮುತ್ತಲು ಇದ್ದ ಜನರು
ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು 10 ಅಗ್ನಿಶಾಮಕ
ವಾಹನಗಳು ಬಂದು ಬೆಂಕಿನಂದಿಸಿವೆ. ಆದರೆ
ಸಂಪೂರ್ಣ ಗೋಡನ್ ಸುಟ್ಟು ಭಸ್ಮವಾಗಿದೆ. ಪ್ಲೇವುಡ್
ಗೋಡೌನ್ ಪಕ್ಕದಲ್ಲೇ ಹೆಚ್ಚಿ ಗ್ಯಾಸ್ ಗೋಡೌನ್ ಕೂಡ
ಇತ್ತು. ಗೋಡೌನ್ನಲ್ಲಿ 580 ಲೋಡೆಡ್
ಸಿಲಿಂಡರ್ಗಳಿದ್ದವು. ಅಗ್ನಿ ಅವಘಡದ ಮಾಹಿತಿ
ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಗ್ಯಾಸ್ ಏಜೆನ್ಸಿ ಸಿಬ್ಬಂದಿ
ಅಷ್ಟೂ ಸಿಲಿಂಡರ್ಗಳನ್ನು ಕೂಡಲೇ ಸ್ಥಳಾಂತರಿಸಿದ್ದಾರೆ.
ಒಂದು ವೇಳೆ ಈ ಸಿಲಿಂಡರ್ ಗಳು ಸ್ಥಳದಲ್ಲಿಯೇ
ಇದ್ದಿದ್ದರೆ ದೊಡ್ಡ ಅನಾಹುತವೇ ನಡೆದುಹೋಗುತ್ತಿತ್ತು.