
ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲು
ಈಜಲು ಹೋಗಿದ್ದ ಇಬ್ಬರು
ಯುವಕರು ನೀರು ಪಾಲು
ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ
ಕಡಕೋಳ ಸಮೀಪದ ಬಾಳೆಕುಂದ್ರಿ ಕಾಲುವೆಯಲ್ಲಿ
ಈಜಲು ಹೋಗಿದ್ದ ಇಬ್ಬರು ಯುವಕರು ನೀರು
ಪಾಲಾಗಿರುವ ಘಟನೆ ನಡೆದಿದೆ.
ತೋರಣಕಟ್ಟೆ ಗ್ರಾಮದ ಪ್ರಕಾಶ್ ಬಡಕನೂರ ಹಾಗೂ
ವಿಟ್ಟಲ ಕಟ್ಟಳ್ಳಿ, ಕಬ್ಬು ಕಟಾವ್ ಮಾಡಿ ಮರಳಿ ಮನೆಗೆ
ಹೋಗುವಾಗ ಬಾಳೆಕುಂದ್ರಿ ಕಾಲುವೆಯಲ್ಲಿ ಈಜುಲು
ಹೋಗಿದ್ದಾರೆ. ಈ ವೇಳೆ ಒಬ್ಬ ಯುವಕನಿಗೆ ಈಜಲು
ಬಾರದೆ ಇನ್ನೊಬ್ಬ ಯುವಕನಿಗೆ ಹಿಡಿದುಕೊಂಡಿದ್ದಾನೆ. ಈ
ವೇಳೆ ನೀರಿನಿಂದ ಹೊರಗೆ ಬರಲಾಗದೆ ಇಬ್ಬರೂ
ಯುವಕರು ನೀರು ಪಾಲಾಗಿದ್ದಾರೆ. ಸ್ಥಳಕ್ಕೆ ಕಟಕೋಳ
ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,
ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.